ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ..
ನಾಳೆ ೫೩ನೆ ರಾಜ್ಯೋತ್ಸವ. ಕನ್ನಡಿಗರಿಗೆಲ್ಲ ಇದು ಶುಭದಿನ. ನಮ್ಮ ಕನ್ನಡ ನಾಡು ರಚನೆಯಾದ ದಿನ. ಈ ರಾಜ್ಯೋತ್ಸವ ಇನ್ನೂ ವಿಶಿಷ್ಟವಾದದ್ದು. ಏಕೆಂದರೆ ನಮ್ಮ ಮಧುರವಾದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಕೇಂದ್ರ ಸರ್ಕಾರವು ಎಲ್ಲಾ ಕನ್ನಡಿಗರಿಗೆ ರಾಜ್ಯೋತ್ಸವಕ್ಕಾಗಿ ಈ ಚಿನ್ನದಂಥ ಉಡುಗೊರೆಯನ್ನು ನೀಡಿದೆ. ನಾಲ್ಕು ವರ್ಷಗಳಿಂದ ಕನ್ನಡಿಗರು ಮಾಡುತ್ತಿರುವ ಹೋರಾಟಕ್ಕೆ ಇಂದು ಪ್ರತಿಫಲ ದೊರೆತಂತಾಗಿದೆ.೨೦೦೬ ಜೂನ್ ತಿಂಗಳಿನವರೆಗೂ, ಭಾರತದಲ್ಲಿ ಸಂಸ್ಕೃತ ಮಾತ್ರ ಶಾಸ್ತ್ರೀಯ ಭಾಷಾ ಸ್ಥಾನಮಾನ ಹೊಂದಿತ್ತು. ಆದರೆ ಜೂನ್ ೬ ೨೦೦೬ ರಂದು ಆಗಿನ ರಾಷ್ಟ್ರಪತಿಗಳಾಗಿದ್ದ ಡಾ ಏ. ಪಿ. ಜೆ. ಅಬ್ದುಲ್ ಕಲಾಮ್ ರವರು ತಮಿಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಒದಗಿಸಿದರು. ಇದಾದ ನಂತರ, ಕನ್ನಡಿಗರು ಕನ್ನಡಕ್ಕೂ ಸಹ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಕೊಡಬೇಕೆಂದು ಹೋರಾಟ ಮಾಡಿದರು. ಹಲವಾರು ಕನ್ನಡಪರ ಸಂಘಟನೆಗಳು ಈ ಹೋರಾಟದಲ್ಲಿ ಪಾಲ್ಗೊಂಡವು. ಈ ಎಲ್ಲಾ ಹೋರಾಟಗಳಿಗೆ ಫಲ ದೊರೆತ ದಿನ ಇಂದು.
ಎಲ್ಲಾ ಕನ್ನಡಿಗರಿಗೂ ಈ ಶುಭ ಸಂದರ್ಭದಲ್ಲಿ ನನ್ನ ಎದೆಯಾಳದಿಂದ ಶುಭಾಶಯಗಳನ್ನು ತಿಳಿಸಲು ಇಚ್ಚಿಸುತ್ತೇನೆ. ನಮ್ಮ ಕನ್ನಡ ಭಾಷೆಯನ್ನೂ ಉಳಿಸೋಣ. ಬೆಳೆಸೋಣ.
ಕನ್ನಡಾಂಬೆಗೆ ಜೈ
0 Comments:
Post a Comment
Subscribe to Post Comments [Atom]
<< Home